ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಯುದ್ಧ ಅನಿವಾರ್ಯವೇ?
ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಯುದ್ಧ ಅನಿವಾರ್ಯವೇ? ಮುಳುಗುತ್ತಿರುವ ಹಡಗಿಗೆ ಕಲ್ಲೆಸೆದ ಅಪವಾದ ಬೇಕೇ? ಪ್ರತಿಯೊಂದು ಉಗ್ರಗಾಮಿ ದಾಳಿಯ ನಂತರ ಪ್ರತಿಯೊಬ್ಬ ದೇಶಭಕ್ತ ಭಾರತೀಯನ ಮನಸ್ಸಿನಲ್ಲಿ ಮೂಡುವ ಆಕ್ರೋಶದ ತೀರ್ಮಾನವೆಂದರೆ ಇನ್ನು ಸಾಧ್ಯವಿಲ್ಲ, ಯುದ್ಧವೊಂದೇ ಪರಿಹಾರ ಎಂಬುದು. ಪ್ರತಿನಿತ್ಯ ನಮ್ಮ ಸೈನಿಕರು ದೇಶಕ್ಕಾಗಿ ಹುತಾತ್ಮರಾಗುವುದನ್ನು ನೋಡುತ್ತಾ ಸುಮ್ಮನೇ ಕೂತುಕೊಳ್ಳಲು ಯಾವ ಭಾರತೀಯನೂ ಒಪ್ಪುವುದಿಲ್ಲ. ಆದರೆ ಇಡೀ ದೇಶದ ಜನತೆ ಮತ್ತು ಮಾಧ್ಯಮಗಳು ಒಕ್ಕೊರಲಿನಿಂದ ಕೂಗಿದರೂ ಸರ್ಕಾರ ಅಥವಾ ಸೈನ್ಯ ಆ ತೀರ್ಮಾಣಕ್ಕೆ ತಕ್ಷಣಕ್ಕೆ ಬರುವುದಿಲ್ಲ. ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಯುದ್ಧ ಅನಿವಾರ್ಯವೇ? ಅಥವಾ ಇಲ್ಲವೇ? ಯುದ್ಧ ಅನಿವಾರ್ಯವೆಂಬ ತೀರ್ಮಾಣಕ್ಕೆ ಬರುವ ಮೊದಲು ಹಲವಾರು ಅಂಶಗಳನ್ನು ನಾವು ಗಮನಿಸಬೇಕಾಗುತ್ತದೆ. ಪ್ರಾಚೀನ ಕಾಲದಲ್ಲಿ ಎರಡು ರಾಜ್ಯಗಳ ನಡುವೆ ಆಗುತ್ತಿದ್ದ ಯುದ್ಧಗಳಲ್ಲಿ ಬಿಲ್ಲು-ಬಾಣ, ಕತ್ತಿ, ಭರ್ಚಿ ಮುಂತಾದ ಕೆಲವೊಂದು ಆಯುಧಗಳ ಬಳಕೆಯಿಂದ ಹಲವಾರು ಸೈನಿಕರು ಸಾಯುತ್ತಿದ್ದರು, ಕೊನೆಗೆ ಒಂದು ರಾಜ್ಯದ ರಾಜ ಸೋತ ಅಥವಾ ಸತ್ತ ನಂತರ ಗೆದ್ದ ರಾಜ್ಯದ ರಾಜನ ಆಡಳಿತ ಅಲ್ಲಿ ಬರುತ್ತಿತ್ತು. ಸೋತ ರಾಜ್ಯದ ಜನತೆಗೆ ಯುದ್ಧದ ನೇರ ಪರಿಣಾಮ ಹೆಚ್ಚಿಗೆ ಆಗುತ್ತಿರಲಿಲ್ಲ. ಆದರೆ ಗೆದ್ದ ರಾಜ ಅಥವಾ ಅವನ ಸೈನಿಕರು ಕ್ರೂರಿಯಾಗಿದ್ದರೆ, ಸೋತ ರಾಜ್ಯದ, ಜನರ ಸಂಪತ್ತು ಲೂಟಿ, ಹತ್ಯೆ, ಅತ್ಯಾಚಾರ ಇ...